Haridasa Sahitya — Vyasadasa
Vaidya banda nodi venkatanemba
ವೈದ್ಯ ಬಂದ ನೋಡಿ –
Composer: Purandara Dasaru · Deity: Srinivasa / Venkatesha · Genre: Bhakti
Kannada lyrics
ವೈದ್ಯ ಬಂದ ನೋಡಿ – ವೆಂಕಟನೆಂಬ |ವೈದ್ಯ ಬಂದ ನೋಡಿ || ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ || ಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ || ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ || ಹೊನ್ನು – ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ || ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ || ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು || ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ || ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ…
Transliteration
Vaidya banda nodi venkatanemba vaidya banda nodi| Vaidya bandanu veda vedya nodigale shridevi ramananu shrinivasanemba|| Estu dinada rogagalanembuda balla gattiyagi dhatu rasagalanu balla Kasta badisalenna bhava roga bidisuva shistavada deha kottu kayuvaniva||1|| Honnu hanangala annava anusarisi tanna dasanemba nijava nodi Chennagi jihvage svadavagiruvantha tanna namamrta divya ausadaviva||2|| Ita…