Haridasa Sahitya — Vyasadasa
Vairagya bhagya sulaadhi
ವೈರಾಗ್ಯಭಾಗ್ಯ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ವೈರಾಗ್ಯಭಾಗ್ಯ ಸುಳಾದಿ ರಾಗ ದರ್ಬಾರಿಕಾನಡ ಧ್ರುವತಾಳ ಬಲು ಚರ್ಮಚೀಲದೊಳಗೆ ರಕ್ತ ಮಲಮೂತ್ರ ಯಲು ಜಂತುಗಳನ್ನು ತುಂಬಿಸಿ ತನ್ಮಧ್ಯದೊಳು ಮತ್ತು ಮಾಂಸ ಚೀಲವನೊಂದು ನಿರ್ಮಿಸಿ ಪೊಲೆಯ ಮೇಲಣ ಶುಕ್ಲ ಶೋಣಿತದೀ ಮುಳುಗಿಸಿ ತಂದಿರೆ ದಶಮಾಸ ಪರಿಯಂತ ಎಲೆ ಜೀವಾ ಬಹಳ ಕೇಶಗಳನುಂಬಿ ನೀನು ಇಳೆಗೆ ಬಂದು ಬಾಲಕನಾಗಿ ಮತ್ತು ತೊಟ್ಟಿಲೊಳು ಪೊರಳಿ ಮಲಮೂತ್ರದಲ್ಲಿ ಅಳುವೆ ಹಸುತೃಷೆಯಾದರೆ ಪೇಳಲರಿಯೆ ಬಳಲಿದೆ ನಾನಾ ಜನ್ಮಗಳಲ್ಲಿ ಇನಿತೊ ಹುಲು ಪಕ್ಷಿ ಶ್ವಾನ ಸೂಕರ ಯೋನಿಯಲಿ ಬಂದು ಕೊಲೆಗೊಳಗಾದೆ ಶ್ರೀಹಯವದನನ ಮರೆದೆ ॥ ೧ ॥ ಮಠ್ಯತಾಳ ವೇದಶಾಸ್ತ್ರಗಳಂಗಳನೋದಿ ವಾದಿಸುವೆನೋ ವೃತ್ತಿ ಕ್ಷೇತ್ರಕ್ಕಾಗಿ ಕ್ರೋಧಿ ನೃಪರ ವಾಲೈಸಿ ನೊಂದೆ ಸ್ತ್ರೀಧನಾ…