Haridasa Sahitya — Vyasadasa

Stotra bhaga sulaadhi

ಸ್ತೋತ್ರ ಭಾಗ ಸುಳಾದಿ

Composer: Vadirajaru · Deity: Hari · Genre: Sulaadi

Kannada lyrics

ಸ್ತೋತ್ರ ಭಾಗ ಸುಳಾದಿ ರಾಗ ಸಿಂಧುಭೈರವಿ ಧ್ರುವತಾಳ ಕಲ್ಕಿಯಾಗಿ ತುರಗವನೇರಿ ಖಳರ ಕಟಕವ ಪೊಕ್ಕು ಹಿಂಭಾಗದ ಮೂರ್ಖರ ಶಿಕ್ಷಿಪೆನೆಂದು ಸೊಕ್ಕು ಮುರಿವದಕ್ಕೆ ಭೂಚಕ್ರಗಳು ವಕ್ರದಿಂದ ಲೆಸ್ಬಿವಿಲ್ಲದೆ ಗಣವ ಲೆಕ್ಕಿಸದವನ ಜೀವ ಐಕ್ಯವ ಪೇಳ್ವನ ತಮಕ್ಕೆ ನೂಕಬೇಕೆಂದು ಉಕ್ಕು ತಗ್ಗಿಸುವದಕ್ಕೆ ಚಿನ್ನಾದ್ಯರೊಡನೆ ಜಯವ ಇಕ್ಕೆಲದಲ್ಲಿಟ್ಟುಕೊಂಡ ರಕ್ಕಸರ ಅಕ್ಕಸವೈರಿ ಲಕ್ಷುಮಿಯ ರಕ್ಷೆಯಾಗಿ ಪಚ್ಚೆಯದ ಕಠಾರಿಯ ಪಕ್ಕೆಲಿ ಸಿಕ್ಕಿಸಿದ ಪರಾಕ್ರಮಿ ಸಿರಿ ಹಯವದನ ॥ ೧ ॥ ಮಠ್ಯತಾಳ ಕಟ್ಟಿದ ಹೊನ್ನ ಕಠಾರಿಯ ನೋಡು ಮೆಟ್ಟಿದ ರನ್ನದ್ದಾವುಗೆ ನೋಡು ತೊಟ್ಟಿಹ ಕನಕ ಕವಚವ ನೋಡು ಹತ್ತಿಲಿಟ್ಟಿಹ ಖರಾ ಚೂರಿಯ ಕಾಂತಿಯ ನೋಡು ದುಷ್ಟರ ತರಿವಾತ ನಿಷ್ಟರ…