Haridasa Sahitya — Vyasadasa
Sriharipada mahime sulaadhi
ಶ್ರೀಹರಿಪಾದ ಮಹಿಮೆ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ಶ್ರೀಹರಿಪಾದ ಮಹಿಮೆ ಸುಳಾದಿ ಶ್ರೀಹರಿಪಾದ ನೆರೆನಂಬಿ ಬಾಳ್ವದೇ ಮುಖ್ಯ ಸಾಧನ ರಾಗ ಮಾಂಡ್ ಧ್ರುವತಾಳ ಹರಿಪಾದ ನೆನೆವಂಗೆ ಅರಿಗಳ ಭಯವಿಲ್ಲ ಹರಿಪಾದ ನೆನೆವಂಗೆ ದುರಿತ ಭಯವಿಲ್ಲ ಹರಿಪಾದ ನೆನೆವಂಗೆ ನರಕದ ಭಯವಿಲ್ಲ ಹರಿಪಾದ ನೆನೆವಂಗೆ ಮಾಯಾದ ಭಯವಿಲ್ಲ ಹರಿಪಾದ ನೆನೆವಂಗೆ ಭವದ ಭಯವಿಲ್ಲ ಹರಿಪಾದ ನೆನೆವಂಗೆ ವಿಷಯ ಭಯವಿಲ್ಲ ಹರಿಪಾದ ನೆನೆವಂಗೆ ಜನನ ಭಯವಿಲ್ಲ ಹರಿಪಾದ ನೆನೆವಂಗೆ ಮರಣದ ಭಯವಿಲ್ಲ ಬರಿದೆ ಮಾತೇ ಅಲ್ಲ ಸಿರಿಹಯವದನನು ಕರದು ಮುಕ್ತಿಯನಿತ್ತು ಅನುಗಾಲ ಸಲಹುವ ॥ ೧ ॥ ಮಠ್ಯತಾಳ ಆವ ಧ್ರುವನ ನೋಡಿ ಸುರಲೋಕದಲಿ ಭೂ ವಿಭೀಷಣನ ನೋಡಿರಯ್ಯಾ ಅವನಿ ಕೆಳಗೆ ಬಲಿಯುತ್ಸಹ ನೋಡಿ ಈ ಹಯವದನನ ಭಜಕರೆ ಸಾಕ್ಷಿ ॥ ೨ ॥ ತ್ರಿಪುಟತಾಳ…