Haridasa Sahitya — Vyasadasa
Srihari swatantra prameya sadhana sulaadhi
ಶ್ರೀಹರಿ ಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ಶ್ರೀಹರಿ ಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಹರಿ ಸ್ವಾತಂತ್ರ ಸರ್ವೇಶ ಸಿರಿ ವಿರಿಂಚಿ ಸಮೀರ ಗರುಡ ಶಂಕರ ಶಕ್ರಾದ್ಯಮರರಿಗೆ ಪರದೈವ ಸಾಕಾರ ಸಕಲ ಸದ್ಗುಣಪೂರ್ಣ ನಿರುಪಮ ನಿರ್ದೋಷ ನಿತ್ಯತೃಪ್ತ ವರ ಸುವರ್ಣ ವರ್ಣ ಅಖಿಳ ಜನ್ಮಾದಿ ಕಾರಣ ಸ್ಥಿರ ಚರಾ ಜಗದ ಅತ್ಯಂತ ಭಿನ್ನ ಅರಸಿ ಆತಗ ಲಕುಮಿ ಸುರರೆಲ್ಲ ಪರಿವಾರ ತರತಮ್ಯ ಭಾವ ಜೀವರೊಳಿಪ್ಪದು ಪರಮ ಮೋಕ್ಷ ವೆಂಬೋದು ವೈಕುಂಠಾದಿಲೋಕ ಪರಪಂಚ ಭೇದ ಪಂಚಕಾ ಭರಿತಾ ಪರಮಾರ್ಥ ಸತ್ಯವಿದೆಲ್ಲ ಪುಶಿ ಅಲ್ಲವೆಂದು ಕರುಣಾಕರ ಹಯವದನ ಬಲ್ಲ ಹರಿ ಸ್ವಾತಂತ್ರ ಸರ್ವೇಶಾ ॥ ೧ ॥ ಮಠ್ಯತಾಳ ತ್ರಿವಿಧ ಜೀವರಿಹರು ಜಗದೊಳು ಭವ ವಿಮೋಕ್ಷ ತಮವವರಗತಿ ತ್ರಿವಿಧ ಸಾಧನಂಗಳಿಹವು ವಿ…