Haridasa Sahitya — Vyasadasa

Sri venkatesha swapna mahatma sulaadhi

ಶ್ರೀವೆಂಕಟೇಶನು ಸ್ವಪ್ನದಲ್ಲಿ ತೋರಿದ ಮಹಾತ್ಮ ಸುಳಾದಿ

Composer: Vadirajaru · Deity: Hari · Genre: Sulaadi

Kannada lyrics

ಶ್ರೀವೆಂಕಟೇಶನು ಸ್ವಪ್ನದಲ್ಲಿ ತೋರಿದ ಮಹಾತ್ಮ ಸುಳಾದಿ ರಾಗ ನೀಲಾಂಬರಿ ಧ್ರುವತಾಳ ಅರಳಿದ ಕೆಂದಾವರಿಯ ಇರವ ಧಿಕ್ಕರಿಸುವ ಗಿರಿಯ ತಿಮ್ಮರಾಯನ ಚರಣಗಳ ಕಂಡೆ ನಾ ಅರುಣ ತಳದಲಿಪ್ಪ ಅಂಕುಶ ಧ್ವಜ ವಜ್ರಾದಿಂ ಸುರುಚಿರ ರೇಖೆಗಳ ಸೊಬಗು ಕಂಡೆ ನಾ ಬೆರಳು ಸಾಲ್ಗಳ ಮೇಲೆ ಬೇರೆ ತೋರುವ ಭಾಸುರ ನಖಾಮಣಿಗಳೆಸೆವ ಕಿರಣಗಳ ಕಂಡೆ ನಾ ಕಿರಿಗೆಜ್ಜೆ ಕಡೆಯ ಪೆಂಡೆಯ ಪ್ರಭೆಯ ಕಂಡೆ ಎರಡು ರನ್ನದ ಕನ್ನಡಿಯ ತೆತ್ತಿಸಿದ ವೋಲು ಮುರಹರನ ಮೋಹನದ ಜಾನು ದ್ವಯವ ಕಂಡೆ ನಾ ಕರಿಯ ದಂತವ ಪೋಲ್ವ ಜಂಘಗಳ ಕಂಡೆ ನಾ ಉರುಟು ಕದಳಿಯ ಕಂಭದಂತೆ ಉರುತರವಾದ ವರ್ತುಲ ಹರಿಯ ಊರು ಪೀವರ ಕಂಡೆ ಕನಸಿನಲಿ ವರ ಪೀತಾಂಬರ ಕಾಂಚಿ ಕಿಂಕಿಣಿ ಜಾಲಗಳಿಂದ ದಾಮ ಉಡಗಿ ಮೆರೆವ ಕರ…