Haridasa Sahitya — Vyasadasa

Sri rama mahima sulaadhi

ಶ್ರೀರಾಮ ಮಹಿಮಾ ಸುಳಾದಿ

Composer: Vadirajaru · Deity: Hari · Genre: Sulaadi

Kannada lyrics

ಶ್ರೀರಾಮ ಮಹಿಮಾ ಸುಳಾದಿ ಐತಿಹಾಸಿಕ ರಾಮಾಯಣ ಸಂಗ್ರಹ ಕಥಾ ರಾಗ ಕಲ್ಯಾಣಿ ಧ್ರುವತಾಳ ದಶರಥ ನಂದನ ಋಷಿಯಾಗ ಸಂರಕ್ಷಣ ಶಶಿಮುಖಿ ಶಾಪ ವಿಮೋಚನ ಪಶುಪತಿ ಧನುಭಂಜನ ಬಿಸಜನೇತ್ರ ಜಾನಕಿ ಕುಶಲ ಮನೋರಂಜನ ಪರಶುರಾಮ ಗರ್ವನಾಶ ಅಸುರ ಸಂಹಾರಕ ದಶರಥಾಜ್ಞಾಧಾರಕ ದಶಶಿರೋಭಗಿನಿ ಶಿಕ್ಷಕ ರಸಿಕ ಸುಗ್ರೀವ ಪೋಷಣ ರೌದ್ರವತಿ ನಿಗ್ರಹಣ ಅಸಮ ಸೇತು ಬಂಧನ ಅರಿಮದ ಖಂಡನ ಶಶಿನಿಕರ ಲಾವಣ್ಯ ಶ್ರೀಮುದ್ದು ಹಯವದನ ॥ ೧ ॥ ಮಟ್ಟತಾಳ ಲಂಕಾನಗರ ಪರಿಸ್ತರಣ ವಾಲಸ್ಯಗೈಯದೆ ಮಾಡಿದ ಹನುಮ ಹುಂಕರಿಪ ಕುಂಭಕರ್ನನ ಹೊಡೆದು ಕೆಡಹಿದಂಥ ಜಾಣ ನಿಶ್ಯಂಕ ಮುದ್ದು ಹಯವದನ ಶರಣು ಹೊಕ್ಕೆ ಕಾಯೋ ಎನ್ನ ॥ ೨ ॥ ತ್ರಿವಿಡಿತಾಳ ದಶಶಿರ ಛೇದನ ಧರಣಿ ಭಯಹರಣ ಕುಶಲಗಂಧಿನಿ ಗ್ರಹ…