Haridasa Sahitya — Vyasadasa
Sankshipta srishtiprakara sulaadhi
ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿ ರಾಗ ಸಾವೇರಿ ಧ್ರುವತಾಳ ಚಿನುಮಯ ಮೂರುತಿ ಪ್ರಳಯ ಜಲಧಿಯೊಳು ವನಿತೆ ಶ್ರೀ ಭೂಮಿ ದುರ್ಗೆಯರೊಡನೆ ತನ್ನ ಉದರದಲ್ಲಿ ಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿ ತುಂಬಾಕೊಂಡು ತನಯನ ನೂರುವರುಷ ಪರಿಯಂತದಿ ವನಜಾಕ್ಷ ವಟಪತ್ರ ಶಯನನಾಗಿ ಜನರೆಲ್ಲ ತಮ್ಮ ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿ ಕೊಳ್ಳಲೆಂದು ಕರುಣಿ ಪುನರಪಿ ಸೃಷ್ಟಿಯ ಮಾಡುವೆನೆಂದು ಲಾಲನೆಗೆ ಪ್ರಕೃತಿಯ ಮಮತೆ ಇತ್ತು ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು ಸೃಜಿಸಿದ ಹಯವದನ ಪ್ರಭು ॥ ೧ ॥ ಮಠ್ಯತಾಳ ಮಹತತ್ವವ ಸೃಜಿಸಿ ಮರುತ ಬ್ರಹ್ಮರಿಟ್ಟ ಅಹಂಕಾರದಿ ಗರುಡ ಶೇಷರುದ್ರರಿಟ್ಟ ಅಹಂಕೃತಿ ತೃತೀಯ ಭಾಗವನೆ ಮಾಡಿ ಶ್ರೀಹಯವದನ ಭೂತೇಂದ್ರ…