Haridasa Sahitya — Vyasadasa
Hariye sarvottamana prameya sulaadhi
ಹರಿಯೆ ಸರ್ವೋತ್ತಮನೆಂಬ ಪ್ರಮೇಯ ಸಾಧನ ವಿಷಯ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ಹರಿಯೆ ಸರ್ವೋತ್ತಮನೆಂಬ ಪ್ರಮೇಯ ಸಾಧನ ವಿಷಯ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ- ಯಂಬಕನ ಗೌರಿಯರಸನ ತುತಿಸುತಿದಕೋ ಸಾಂಬಶಿವನೆಂಬವನು ಇವನೆ ಆದಡೆ ಜಡೆಯ ಸಂಭ್ರಮದಿಂದ ಗಂಗೆ ಗರ್ವಿಸುವಳು " ಡಂಭ ಏಕೋರುದ್ರನದ್ವಿತೀಯವತಸ್ತೆ " ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವ ಸಖನು ಒ- ಡಂಬಡದು ವಿಷ್ಣುನೆಂಬವತಾರ ಮೂಲರೂಪ ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ ಇಂಬು ಸಲ್ಲುವದು " ತ್ರಿಷ್ಟಧಿಕೇಷುಕೊ ಮಹಾನ್ ಯೆಂಬ ಹಿರಿಯರ ಮತವ ಸುಮತವೆಂದು ನಂಬು ಮನುಜ ಸ್ತಂಭಸಂಭವ ರುದ್ರ ಶೀರ್ಷಕನು ಪುರಹರನೆ ಗಡ ಅಂಬುಜಾಕ್ಷ ಹಯವದನ ಅಖಿಳರೊಡಿಯಾ ॥ ೧ ॥ ಮಠ್ಯತಾಳ ಆರು ಪುರಾಣ ಗೌರಿಯ ಗಂಡನವು ಮತ್ತಾರು ಪುರಾಣ ಚತು…