Haridasa Sahitya — Vyasadasa
Dashanantavatara mahima sulaadhi
ಮತ್ಯಾದಿ ದಶಅನಂತಾವತಾರ ಮಹಿಮಾ ಸುಳಾದಿ
Composer: Vadirajaru · Deity: Hari · Genre: Sulaadi
Kannada lyrics
ಮತ್ಯಾದಿ ದಶಅನಂತಾವತಾರ ಮಹಿಮಾ ಸುಳಾದಿ ರಾಗ ವರಾಳಿ ಧ್ರುವತಾಳ ಹರಿ ನಿನ್ನ ಜ್ಞಾನ ಸಿರಿಗೆಣೆಗಾಣೆ ಮಾವತಾರದಿ ಶ್ರುತಿಗಳ ವಿಧಿಗೆ ಪೇಳಿದೇಯಾಗಿ ಹರಿ ನಿನ್ನ ಶಕುತಿಗೆ ಎಣೆಗಾಣೆನಜಾಂಡ ಮಂದರಗಳ ಬೆನ್ನಿಲಿ ಧರಿಸಿ ಮೆರದೆಯಾಗಿ ಹರಿ ನಿನ್ನ ಕರುಣಕ್ಕೆ ಎಣೆಗಾಣೆ ವರಹವತಾರದಿ ದಾಡಿಯಲ್ಲಿ ಧಾರುಣಿಯ ನೆಗಹಿದೆಯಾಗಿ ಹರಿ ನಿನ್ನ ಶೂರತ್ವಕ್ಕೆಣೆಗಾಣೆ ಹಿರಣ್ಯಕನುದರವ ಬಗದಿ ನರಹರಿ ನೀ ಮೆರದೆಯಾಗಿ ಹರಿ ನಿನ್ನ ಯುಕುತಿಗೆ ಎಣೆಗಾಣೆ ವಟುವಾಗಿ ಚರಣದಿ ಮೂಲೋಕಗಳ ಅಳದೆಯಾಗಿ ಹರಿ ನಿನ್ನ ಉದಾರತ್ವಕ್ಕೆಣೆಗಾಣೆ ಮಹಿಯ ವಿಸ್ತರದ ದ್ವೀಪಗಳ ಭೂಸುರರಿಗೆ ಇತ್ತೆಯಾಗಿ ಹರಿ ನಿನ್ನ ವೈರಾಗ್ಯ ಭಾಗ್ಯಕ್ಕೆಣೆಗಾಣೆ ಅರಸತ್ವ ತೊರೆದು ಅರಣ್ಯಕ್ಕೆ ಪೋದೆ…