Haridasa Sahitya — Vyasadasa

Adhyatma prameya sulaadhi

ಆಧ್ಯಾತ್ಮ ಪ್ರಮೇಯ ಸುಳಾದಿ

Composer: Vadirajaru · Deity: Hari · Genre: Sulaadi

Kannada lyrics

ಆಧ್ಯಾತ್ಮ ಪ್ರಮೇಯ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ಒಪ್ಪುವ ಮಾನಿಸ ದೇಹಂಗಳೆಲ್ಲ ಬ್ರಹ್ಮಪುರಕ್ಕೊಂಭತ್ತು ದ್ವಾರ ಗಡಾ ಎಪ್ಪತ್ತೆರಡು ಸಾಸಿರ ನಾಡಿಯೊಳು ಇಪ್ಪವು ಗಡಾ ಬೀದಿ ಬೀದಿಯಂತೆ ಅಪ್ರತಿ ಮಧ್ಯೆಕ ನಾಡಿ ರಾಜ ಬೀದಿ ಷಟದ್ಮವದರೊಳು ಬಗೆ ಬಗೆಯ ಸರ್ಪಶಯನನೋಲಗ ಶಾಲೆ ಗಡಾ ಸೂರ್ಯನ ಪ್ರಭೆ ಪಂಜು ಬೆಳಕು ಗಡಾ ತಪ್ಪದೆ ಸುಖವೆಂಬೊ ಸಕ್ಕರೆ ಹೇರು ಒಪ್ಪದು ಗಡಾ ಗಡಾ ದ್ವಾರದಲ್ಲಿ ಅಪ್ರತಿ ಮೊದಲಾದ ದೇವಕ್ಕಳೆಲ್ಲ ಬ್ರಹ್ಮಪಾಲಕರಾದರು ಪಟ್ಟಣ ಸ್ವಾಮಿಗೆ ಅರ್ಪಿಸುವರು ಗಡಾ ಹಯವದನನಿಗೆ ಅವನಪ್ಪಣೆಯಲ್ಲಿ ತಮಗಲ್ಪ ಗಡಾ ಅಪ್ರೀಯವಾದ ದುಃಖಗಳೆಂಬುಳ್ಳಿಯ ಹೇರು ಅಲ್ಪಸಾರ ಜೀವದಂಗಡಿಯಲ್ಲಿ ಗಡಾ ॥ ೧ ॥ ಮಠತಾಳ ಬೀದಿ ಬೀದಿಯಲ್ಲಿ ಇರಳು…