Haridasa Sahitya — Vyasadasa
Vadirajara padava smarisuve
ವಾದಿರಾಜರ ಪದವ ಸ್ಮರಿಸುವೆ
Composer: Haridasa · Deity: Vadirajaru · Genre: Dasara Pada
Kannada lyrics
ವಾದಿರಾಜರ ಪದವ ಸ್ಮರಿಸುವೆ ಅ- ಗಾಧ ಮಹಿಮರ ಸದಯ ಹೃದಯರ ||pa|| ಮೋದತೀರ್ಥರಾಗಮದ ಸಾರವ ಸಾಧು ಜನರಿಗೆ ಬೋಧಿಸಿರ್ಪರ ವಾದದಿಂದಲಿ ವೀರಶೈವರ ಗೆದ್ದು ಮುತ್ತಿನ ಪೀಠವೇರ್ದರ ||1|| ಪಾದದಿಂದಲಿ ಸಕಲ ತೀರ್ಥವ ಮೋದದಿಂದ ಚರಿಸಿ ತೀರ್ಥ ಪ್ರ- ಬಂಧ ಗ್ರಂಥವ ರಚಿಸಿ ಮಾನ್ಯರಾ ಗಿರ್ದ ಗುರುಗಳನೆಂತು ಬಣ್ಣಿಪೆ ||2|| ರಾಜಸಭೆಯೊಳು ರಾಜಭೀಷ್ಮಕ ತನುಜೆಯರಸನ ಸ್ತುತಿಪ ಕಾವ್ಯವ ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ ದಿದನೆ ಗಜದೊಳು ಮೆರೆಸಿದರಸನು ||3|| ಒಂದುನೂರ ಇಪ್ಪತ್ತು ವರ್ಷದೊಳ್ ಸಿಂಧುಶಯನನ ಸೇವಿಸುತ್ತಲಿ ಇಂದ್ರದತ್ತ ವಿಮಾನದಿಂದಲಿ ಸತ್ಯಲೋಕವನೈದಿದ ಗುರುವರ ||4|| ಯುಕ್ತಿಮಲ್ಲಿಕಾ ಗ್ರಂಥದಿಂದ ರಾಜೇಶ ಹಯಮುಖಾನಂತ ಗುಣಗಳ ಪೊಗ…
Transliteration
Vadirajara padava smarisuve a- Gadha mahimara sadaya hrudayara ||pa|| Modatirtharagamada sarava Sadhu janarige bodhisirpara Vadadindali virasaivara Geddu muttina pithaverdara ||1|| Padadindali sakala tirthava Modadinda carisi tirtha pra- Bandha granthava racisi manyara Girda gurugalanentu bannipe ||2|| Rajasabeyolu rajabishmaka Tanujeyarasana stutipa kavyava I jagattinol sreshtha kavyaven Didane g…