Haridasa Sahitya — Vyasadasa

Vadiraja suraraja tanadare

ವಾದಿರಾಜ ಸುರರಾಜ ತಾನಾದರೆ

Composer: Jagannatha Dasaru · Deity: Vadirajaru · Genre: Dasara Pada

Kannada lyrics

ವಾದಿರಾಜ ಸುರರಾಜ ತಾನಾದರೆ ಮೇದಿನಿಯೊಳಗಿಹನ್ಯಾಕೆ ? ||pa|| ಮೇದಿನಿ ಸುರರಿಗೆ ಮೋದ ಕೊಡೋದಕೆ ಸ್ವಾದಿಯೊಳಗೆ ನಿಂತಿಹನದಕೇ ||a.pa|| ಋಜುಗುಣದೊಡೆಯನು ತ್ರಿಜಗಾಧೀಶನು ಭುಜಗಾಂಚಿತನಾದ್ಯಾಕೆ ? ಭಜಿಸುವ ಜನ ಭೂಭುಜ ತಾನೆನಿಸಿ ಅಜನ ಪದ ತಾ ಸೇರೋದಕೆ ||1|| ಸುರತತಿ ಸನ್ನುತ ಸರಸಿಜಭವ ಪದ – ಕರಹನು ನರನ್ಯಾಕಾದಾ ? ಧರೆಸುರರಿಗೆ ತನ್ನ ಕರುಹನು ತಿಳಿಸೀ ಪರಿಪರಿ ಮಹಿಮೆಯ ತೋರಿಸಿದ ||2|| ವೀತಭಯನು ತಾನೀತೆರ ಜಗದಿ ಯಾತಕೆ ಯತಿಯಾದ ? ದಾತ ಗುರುಜಗನ್ನಾಥ ವಿಠಲ ಗುಣ ಖ್ಯಾತಿಯ ತಾಮಾಡಿದ ||3||

Transliteration

Vadiraja suraraja tanadare Mediniyolagihanyake ? ||pa|| Medini surarige moda kododake Svadiyolage nintihanadake ||a.pa|| Rujugunadodeyanu trijagadhisanu Bujagancitanadyake ? Bajisuva jana bubuja tanenisi Ajana pada ta serodake ||1|| Suratati sannuta sarasijabava pada – Karahanu naranyakada ? Dharesurarige tanna karuhanu tilisi Paripari mahimeya torisida ||2|| Vitabayanu tanitera jagadi Yatake yati…