Haridasa Sahitya — Vyasadasa

Vadiraja Suladhi by Vijaya dasa

ಧ್ರುವತಾಳ

Composer: Vijaya Dasaru · Deity: Vadirajaru · Genre: Sulaadi

Kannada lyrics

ಧ್ರುವತಾಳ ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ ಸಾಧು ಸನ್ಮುನಿವರ್ಯ ಸಮ್ಮೋದ ತೀರ್ಥಕರಪಾದ ಸಾದರದಿಂದ ಭಜಿಸಿ ಮೇದಿನಿಗೆ ಭಾರ ವಾದ ಮಾಯಾವಾದಿಗಳ ಗೆದ್ದೆ ವಾದಿರಾಜರ ಮಹಿಮೆ ವರ್ಣಿಸಲರ್ಹನಲ್ಲಾ ಮಾಧವ ವೇದವೇದ್ಯ ವಿಜಯವಿಠ್ಠಲ ತಾನು ಆದರದಿಂದವರ ಭುಜದಿ ಹಯವಕ್ತ್ರನಾಗಿ ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ ಶ್ರೀಧರನ ಮಹಿಮೆ ಸಾಧುಜನರು ಕೇಳಿ ||1|| ಮಟ್ಟತಾಳ ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ ಮೃಡನುತ ಗೋವಿಂದ ಜಡದ ಹರಿವಾಣದಲ್ಲಿ ಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದ ಸಡಗರದ ಭಕ್ಷ ಪಾಯಸ ಘೃತ ನೀಡೆ ಒಡೆಯನು ಬ್ರಹ್ಮಾದಿ ಪರಿವಾರ ಸಹಿತುಂಡು ಕಡಗೋಲು ನೇಣು ಪಿಡಿದುಡುಪಿಲಿ ನಿಂದ ಉಡುರಾಜಮುಖ ನಮ್ಮ ವ…

Transliteration

Dhruvatala Madhavanangri nitya modadalli Bajipa Sadhu sanmunivarya sammoda tirthakarapada Sadaradinda Bajisi medinige bara Vada mayavadigala gedde Vadirajara mahime varnisalarhanalla Madhava vedavedya vijayaviththala tanu Adaradindavara Bujadi hayavaktranagi Padavannu ittu svaduvada Kadali huranavanu unda Sridharana mahime sadhujanaru keli ||1|| Mattatala Kadalalli pavadisida odiya ta podaviyali M…