Haridasa Sahitya — Vyasadasa
Vadiraja prativadi gajendra dha
ವಾದಿರಾಜ ಪ್ರತಿವಾದಿ ಗಜೇಂದ್ರ
Composer: Jagannatha Dasaru · Deity: Vadirajaru · Genre: Dasara Pada
Kannada lyrics
ವಾದಿರಾಜ ಪ್ರತಿವಾದಿ ಗಜೇಂದ್ರ ಧ ರಾಧರಾಟ ವಿಬೋಧದಿ ಚಂದ್ರ ||pa|| ಯಮಿವರನೆ ತ್ರಿವಿಕ್ರಮನ ರಥೋತ್ಸವ ಸಮಯವಿದೆಂದು ಉತ್ಕøಮಣವ ತೊರೆದೆ ||1|| ಬಂದು ಕರೆಯಲು ಪುರಂದರನಾಳ್ಗಳ ಹಿಂದಟ್ಟಿದೆ ಕರ್ಮಂದಿಗಳರಸ ||2|| ಆರ್ಥಿಗಳಿಗೆ ಪರಮಾರ್ಥ ಕೊಡುವ ಸ ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ ||3|| ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ ತಿಧ್ಮಜಿಂಹದಿ ಪ್ರಧ್ವಂಶಿಸಿದೆ ||4|| ಪಾವನೀಯ ಸುಮತಾವಲಂಬಿಗಳ ತಾವಕರೆಂದೀವುದು ವರವ ||5|| ಎಲರುಣಿ ಭಯಕಂಜಿಲಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ ||6|| ಹಯಮುಖ ಪಾದದ್ವಯ ಭಕ್ತಾಗ್ರನೀ ದಯದಿ ವಿಪ್ರನಿಗೆ ನಯನಗಳಿತ್ತೆ ||7|| ಭಾಗೀರಥಿಯಂತ್ಯೋಗಿ ವರಗುರು ವಾಗೀಶರ ಕರಾಬ್ಜ ಸಂಭವನೆ ||8|…
Transliteration
Vadiraja prativadi gajendra dha Radharata vibodhadi chandra ||pa|| Yamivarane trivikramana rathotsava Samayavidendu utkaømanava torede ||1|| Bandu kareyalu purandaranalgala Hindattide karmandigalarasa ||2|| Arthigalige paramartha koduva sa Ttirtha prabandhava kirtane gaide ||3|| Advaita samidhi madhva susiddham Tidhmajimhadi pradhvamsiside ||4|| Pavaniya sumatavalambigala Tavakarendivudu varava ||…