Haridasa Sahitya — Vyasadasa

Vadiraja palisu enna

ವಾದಿರಾಜಾ ಪಾಲಿಸು ಎನ್ನ

Composer: Jagannatha Dasaru · Deity: Vadirajaru · Genre: Dasara Pada

Kannada lyrics

ವಾದಿರಾಜಾ ಪಾಲಿಸು ಎನ್ನ ||pa|| ವಾದಿರಾಜ ತವ ಪಾದಸರೋಜಾ ಮೋದಪರಾಗವ ಸಾದರ ನೀಡಿ||a.pa|| ಮೋದತೀರ್ಥಸುಮತೋದಧಿಚಂದಿರ ಪಾದವ ನಂಬಿದೆ ನೀ ದಯದಲಿ ||1|| ಅರ್ತಜನರ ಮನದಾರ್ತಿಯ ಕಳೆದಿಹ ವಾರ್ತದಿ ಬಂದವನಾರ್ತಿಯ ಬಿಡಿಸೋ ||2|| ಎಲ್ಲರಂತೆ ನೀನಲ್ಲವೊ ಜಗದೊಳು ಬಲ್ಲಿದನೆಂಬೊದು ಬಲ್ಲೆ ಬಲ್ಲೆನು ||3|| ಕುರ್ತುಮಕರ್ತುಸಮರ್ಥನೆ ಎನ್ನನು ಮರ್ತರೆ ಅನ್ಯ ಸಮರ್ಥರ ಕಾಣೆ ||4|| ಕಾಮಧೇನು ಸಮ ಭೂಮಿಯ ತಳದಿ ಕಾಮಿತನೀಡೈ ಸುರತರುವೇ ||5|| ಮೋಕ್ಷದ ಕರುಣ ಕಟಾಕ್ಷದಿ ಎನ್ನಾ ವೀಕ್ಷಿಸಿ ಮನದಾಪೇಕ್ಷವ ಸಲಿಸೋ ||6|| ಯಾತಕೆ ಎನ್ನನು ಈತೆರ ಮಾಡಿದೇ ನೀತ ಗುರುಜಗನ್ನಾಥವಿಠಲ ದೂತ ||7||

Transliteration

Vadiraja palisu enna ||pa|| Vadiraja tava padasaroja Modaparagava sadara nidi||a.pa|| Modatirthasumatodadhi candira Padava nambide ni dayadali ||1|| Artajanara manadartiya kalediha Vartadi bandavanartiya bidiso ||2|| Ellarante ninallavo jagadolu Ballidanembodu balle ballenu ||3|| Kurtumakartusamarthane ennanu Martare anya samarthara kane ||4|| Kamadhenu sama bumiya taladi Kamitanidai surataruve ||…