Haridasa Sahitya — Vyasadasa
Vadiraja asmadguru vadiraja
ವಾದಿರಾಜ ಅಸ್ಮದ್ಗುರು ವಾದಿರಾಜ
Composer: Jagannatha Dasaru · Deity: Vadirajaru · Genre: Dasara Pada
Kannada lyrics
ವಾದಿರಾಜ ಅಸ್ಮದ್ಗುರು ವಾದಿರಾಜ ||pa|| ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ ||1|| ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2||2|| ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ ||3|| ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು ||4|| ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ ||5||
Transliteration
Vadiraja asmadguru vadiraja ||pa|| Vadiraja tava padakamalakabi Vadana malpe samodavittu kayo ||1|| Saridarige kalpa buruha dante ma Noratha salisuva surigalarase 2||2|| Beda pancakavanu sadhisi kumataku Vadigarvadri vibedana gaide ||3|| Desikavarya vagisa kuvarane Klesa harisu aganasa gaidu ||4|| Siri jagannathavithalana Sugunagalanudina pogali higguvo ||5||