Haridasa Sahitya — Vyasadasa
Vadhiraja munipa
ವಾದಿರಾಜ ಮುನಿಪಾ
Composer: Gopala Dasaru · Deity: Vadirajaru · Genre: Bhakti
Kannada lyrics
ವಾದಿರಾಜ ಮುನಿಪಾ ಹಯಮುಖ ಪಾದಕಮಲ ಮಧುಪಾ ||ಪ|| ನೀ ದಯದಲಿ ತವ ಪಾದ ಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು ||ಅ.ಪ|| ಮೂಷಕ ಬಿಲದಿಂದ ಉದರಪೋಷಕ ಬರಲಂದು ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ ಕ್ಲೇಶ ಕಳೆದು ಸಂತೋಷಗೈಸಿದೆ ||೧|| ಮುಂದೆ ಭೂತನರನಾ ಪ್ರೇರಿಸಿ ಹಿಂದೆ ಒಬ್ಬ ನರನಾ ನಿಂದಿರಿಸಿದೆ ಆನಂದದಿಂದ ಜನ ವೃಂದ ನೋಡುತಿರೆ ಅಂದಣ ನಡಿಸಿದ್ಯೋ ||೨|| ಕ್ಷಿತಿಯೊಳು ಸತಿ ತನ್ನಾ ವಲ್ಲಭ ಮೃತಿಯೈದಿರೆ ಮುನ್ನಾ ಅತಿಶೋಕದಿ ಬಂದು ನುತಿಸಲು ಆ ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ ||೩|| ನರಪತಿ ವ್ಯಾಧಿಯಲಿ ಬಳಲ್ವದ ತ್ವರಿತದಿ ನೀ ಕೇಳಿ ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ ಹರುಷದಿಂದಲಭಯದ ತೋರಿದೆ ||೪|| ಶಾಸ್ತ್ರ ಪ್ರಸಂಗದಲ…
Transliteration
Vadiraja munipa hayamukapadakamala madhupa ||pa|| Ni dayadali tava pada dhyanavanu Adaradali kottadarisennanu ||a.pa|| Mushaka biladinda udaraposhaka baralandu Vasuki Bayadi nimmasanadede bare Klesa kaledu santoshagaiside ||1|| Munde butanarana prerisi Hinde obba narana Nindiriside Anandadinda jana Vrunda nodutire amdana nadisidyo ||2|| Kshitiyolu sati tanna vallaba Mrutiyaidire munna Atisokadi ba…