Haridasa Sahitya — Vyasadasa
Vaadigaja mastakaankusha
ವಾದಿಗಜ ಮಸ್ತಕಾಂಕುಶ
Composer: Vyasarajaru · Deity: Sripadarajaru · Genre: Dasara Pada
Kannada lyrics
ವಾದಿಗಜ ಮಸ್ತಕಾಂಕುಶ ಸುಜನ ಬುಧಗೇಯ | ಮೇದಿನಿ ಸುರವಂದ್ಯ ಶ್ರೀಪಾದರಾಯ || ಪ || ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪ | ಸಕಲ ಸತ್ಯಸ್ಥಾಪ ಸುಜ್ಞಾನ ದೀಪ | ಪ್ರಕಟ ಪಾವನರೂಪ ಅರಿಕುಜನ ಮತಲೋಪ | ನಿಕಟವರ್ಜಿತ ಪಾಪ ಕೀರ್ತಿ ಪ್ರತಾಪ || ೧ || ಹರಿಪತಾಂಬುಜ ಭೃಂಗ ಪರಮತಾಹಿವಿಹಂಗ | ಪರಮ ಸುಗುಣಾಂತರಂಗ | ಭವ ದುರಿತ ಭಂಗ | ಶರಣ ಕೀರ್ತಿ ತರಂಗ ಶತೃ ತಿಮಿರ ಪತಂಗ | ಶರಣು ಶುಭ ಚರಿತಾಂಗ ಷಟ್ಛಾತ್ರ ಸಂಗ || ೨ || ಸಿರಿಕೃಷ್ಣದಿವ್ಯ ಪಾದಾಬ್ಜ ಚಿಂತಾಲೋಲ | ವರ ಹೇಮವರ್ಣ ಮುನಿ ಪತಿಯ ಸುಕುಮಾರ | ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ | ಶರಣ ಜನ ಸುರಧೇನು ಭಕ್ತ ಮಂದಾರ || ೩ ||
Transliteration
Vaadigaja mastakaankusha sujana budhageya | medini suravandya shreepaadaraaya || pa || Sakalashaastra kalaapa sanyaasa kuladeepa | sakala satyasthaapa suj~jaana deepa | prakata paavanaroopa arikujana matalopa | nikatavarjita paapa keerti prataapa || 1 || Haripataambuja bhrunga paramataahivihanga | parama sugunaantaranga | bhava durita bhanga | sharana keerti taranga shatru timira patanga | sharanu…