Haridasa Sahitya — Vyasadasa

Uttamara sanga enagittu

ಉತ್ತಮರ ಸಂಗ ಎನಗಿತ್ತು

Composer: Sripadarajaru · Deity: Vishnu · Genre: Philosophy

Kannada lyrics

ಉತ್ತಮರ ಸಂಗ ಎನಗಿತ್ತು ಸಲಹೊ ||ಪ|| ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ|| ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ ಪರಿಪರಿಯ ಪಾಪಗಳ ಮಾಡಲಾರೆ ಮರಣಜನನಗಳೆರಡು ಪರಿಹರವ ಮಾಡಯ್ಯ ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧|| ಏನ ಪೇಳಲಿ ದೇವ ನಾ ಮಾಡಿದ ಕರ್ಮ ನಾನಾ ವಿಚಿತ್ರವೈ ಶ್ರೀನಿವಾಸ ಹೀನಜನರೊಳಗಾಟ ಶ್ವಾನಾದಿಗಳ ಕೂಟ ಜ್ಞಾನವಂತನ ಮಾಡೊ ಜಾನಕೀರಮಣ ||೨|| ನಿನ್ನ ನಂಬಿದ ಮ್ಯಾಲೆ ಭಯವ್ಯಾತಕೆ ಪನ್ನಗಾಧಿಪಶಯನ ಮನ್ನಿಸಯ್ಯ ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ ಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩||

Transliteration

Uttamara sanga enagittu salaho || pa || chittaja janaka sarvottama shree mukunda || a. Pa || Tiru tirugi puttalaare parara baadhisalaare | pari pariya paapagala maadalaare || janana maranagaleradu pariharava maadayya | karunaa samudra muravairi shreekrushna || 1 || Enapelalo deva naamaadida karma | naanaa vicitravai shreenivaasa || heena janarolagaata shwaanaadigala koota | j~jaanavantana maado ja…