Haridasa Sahitya — Vyasadasa

Uradevara madabekanna

ಊರದೇವರ ಮಾಡಬೇಕಣ್ಣ

Composer: Purandara Dasaru · Deity: Hari · Genre: Philosophy

Kannada lyrics

ಊರದೇವರ ಮಾಡಬೇಕಣ್ಣ ತನ್ನೊಳಗೆ ತಾನೆ ॥ಪ॥ ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಭ್ರೂಮಧ್ಯದಲ್ಲಿ ॥ಅ.ಪ॥ ಎಷ್ಟು ಯುಗಗಳು ತೀರಿ ಹೋಯ್ತಣ್ಣ ದೇವರ ಮಾಡದೆ ಕಷ್ಟದಿಂದ ನೊಂದೆ ಕಾಣಣ್ಣ ಅಷ್ಟ ದಳದ ಕಂಭ ನಿಲ್ಲಿಸಿ ಕಟ್ಟಿ ಚಕ್ರಂಗಳನು ಹಾಕಿ ಸೃಷ್ಟಿದೇವರ ತಂದು ನಿಲ್ಲಿಸಿ ದುಷ್ಟ ಕೋಣನ ಶಿರವ ತರಿದು ॥೧॥ ಕಷ್ಟಕರ್ತವೆಂಬ ಕುರಿಯಣ್ಣ ಅದನ್ನು ತಂದು ಕಟ್ಟಿ ತಲೆಯನು ಹೊಡೆಯಬೇಕಣ್ಣ ಅಷ್ಟಮದದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತಲ್ಲಿ ॥೨॥ ನಾನು ಎಂಬುವ ಮೇಕೆ ಹೋತಣ್ಣ ಅದಕ್ಕೆ ತಕ್ಕ ಜ್ಞಾನವೆಂಬುವ ಪೋತರಾಜಣ್ಣ ಮಾನವೆಂಬ ಚ…

Transliteration

Uradevara madabekanna tannolage tane ||pa|| Ura devara madirendu sarutide Sruti irulu hagalu Dvaragalombattu mucci nillisi brumadhyadalli ||a.pa|| Eshtu yugagalu tiri hoytanna devara madade Kashtadinda nomde kananna Ashta dalada kamba nillisi katti chakrangalanu haki Srushtidevara tandu nillisi dushta konana Sirava taridu ||1|| Kashtakartavemba kuriyanna adannu tandu Katti taleyanu hodeyabekanna A…