Haridasa Sahitya — Vyasadasa
Uddhara madayya udupi
ಉದ್ಧಾರ ಮಾಡಯ್ಯ ಉಡುಪಿ
Composer: Ambabai · Deity: Krishna · Genre: Dasara Pada
Kannada lyrics
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ||pa|| ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ ||1|| ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ ||2|| ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ ||3|| ಬೇಡಲೇನನು ನಿನ್ನ ಕಾಡಲೇತಕೆ ನಾನು ನೀಡುವ ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟ…
Transliteration
Uddhara madayya udupi nilaya Hrudvanajadali nelasi anugala nina tori ||pa.|| Bande bahuduradali ninde tavacharanadadi Tande muddumohana gurukarunadimda Kundugalanenisadele sindhusayanane Hrudaya mandiradi mane madu sundaratmane ||1|| Janmajanmantarada aj~janagala kaledu Karmasasira kadidu karunadinda Rameyarasane ninna anugala smaripantha Sanmargavane toro sarvalokesa ||2|| Japatapagalondariye vra…