Haridasa Sahitya — Vyasadasa

Toredu jivisabahude

ತೊರೆದು ಜೀವಿಸಬಹುದೆ

Composer: Kanakadasaru · Deity: Hari · Genre: Bhakti

Kannada lyrics

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ ತೊರೆದು ಜೀವಿಸಬಹುದೆ ||ಪ|| ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ ಕರಪಿಡಿದೆನ್ನನು ಕಾಯೊ ಕರುಣಾನಿಧಿ ||ಅ.ಪ|| ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ರಾಯ ಮುನಿದರೆ ರಾಜ್ಯವ ಬಿಡಬಹುದು ಕಾಯಜಪಿತ ನಿನ್ನಡಿಯ ಬಿಡಲಾಗದು ||೧|| ಒಡಲು ಹಸಿದರೆ ಅನ್ನವ ಬಿಡಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು ||೨|| ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು ಮಾನಾಭಿಮಾನವ ತಗ್ಗಿಸಬಹುದು ಪ್ರಾಣದಾಯಕನಾದ ಆದಿಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ||೩||

Transliteration

Toredu jivisabahude hari ninna charanava Toredu jivisabahude ||pa|| Baride matekinnu aritu peluvenayya Karapididennanu kayo karunanidhi ||a.pa|| Tayi tandeya bittu tapava madalu bahudu Dayadi bandhugala bidalu bahudu Raya munidare rajyava bidabahudu Kayajapita ninnadiya bidalagadu ||1|| Odalu hasidare annava bidabahudu Padeda kshetrava bittu horadalu bahudu Madadi makkala kadege tolagisibidabahudu…