Haridasa Sahitya — Vyasadasa

Tiliyado ninnata tirupatiya

ತಿಳಿಯದೋ ನಿನ್ನಾಟ ತಿರುಪತಿಯ

Composer: Vijaya Dasaru · Deity: Srinivasa / Venkatesha · Genre: Dasara Pada

Kannada lyrics

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ||pa|| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ||a.pa|| ಆರು ಬಲ್ಲರು ನಿಮ್ಮ – ಶ್ರೀ ಲಕುಮಿ ಮನಸಿಗೆತೋರುದಿಹ ಪರಬೊಮ್ಮ _ ಉಳಿದವರು ಬಲ್ಲರೆನೀರಜಾಸನ ಬೊಮ್ಮ _ ಇದು ನಿನ್ನ ಮರ್ಮ ||ನೀರೊಳಗೆ ಮನೆ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ ||1|| ಸಕಲ ಮಾಯವಿದೇನು _ ವೃಕನ ವಾಯುಸಖನ ಸಲಹಿದೆ ನೀನು _ ಭಕುತಿಯಿಂದಲಿತುತಿಪರಿಗೆ ಸುರಧೇ…

Transliteration

Tiliyado ninnata tirupatiya venkata | pa | polevanirolu geluva moreya | nelavavoduva suliva kanbadi | ileya naliyuva balire bargava kalana bedisi kolala dhvanige | nalina mukiyara nacisuva balu hayadalava bahu havanegarane | a.pa | aru ballaru ninna sri lakumi manasige toruveyo parabomma | ulidavaru ballare nirajasana bomma | idu ninnaya marma | nirolage mane bara bennili koredadiya narasinhane |…