Haridasa Sahitya — Vyasadasa
Thunga theerathi ninta
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ
Composer: Haridasa · Deity: Raghavendra Teertharu · Genre: Dasara Pada
Kannada lyrics
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ || ೧ || ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ || ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ ನಭಮಣ…
Transliteration
Tunga teeradi ninta suyativaranyare pelammayya sangeetapriya mangalasugunataranga munikulottunga kanamma || Cheluva sumukha phaneyalli tilaka namagalu nodamma jalamaniya koralalli tulasimalegalu pelamma sulalita kamandalu dandavane dharisihane nodamma kshulla hiranyakanalli janisida prahladanu tanillihanamma ||1|| Sumdara charanaravindake bhakutiyalinda nodamma vandisi stutisuva bhusuravrunda noda…