Haridasa Sahitya — Vyasadasa

Teraneri meredu baruva

ತೇರನೇರಿ ಮೆರೆದು ಬರುವ

Composer: Haridasa · Deity: Raghavendra Teertharu · Genre: Dasara Pada

Kannada lyrics

ತೇರನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ ಕ| ಗುರು ರಾಘವೇಂದ್ರರೆಂತೆಂಬೋ ಯತಿ ಕುಲ ತಿಲಕ ಕೇಳ್ತಾಂಗಿ ||ಪ|| ಚಂದದಿ ಕುಂದನ ಮುಕುಟವ ಧರಿಸಿದ ಸುಂದರನೀತ ಯಾರಕ್ಕ| ತಂದೆಯ ಆಘಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಾಂಗಿ ||1|| ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹ ನೀತ ಯಾರಕ್ಕ| ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಾಂಗಿ ||2|| ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ| ಹರುಷದಿ ಆನಂದ ವಿಠಲನ ಸಾರಿದ ಪರಿಮಳ ರಾಯ ಕೇಳ್ತಾಂಗಿ ||3||

Transliteration

Teraneri meredu baruva bhusuravandya yarakka| guru raghavendrarentembo yatikulatilaka keltangi ||pa|| Chandadi kundana mukutava dharisida sundaraneeta yarakka| tandeya aghaharidu narahariya torida prahladaraya keltangi ||1|| Vipraru dasaru yatitatigala koodi barutiha neeta yarakka| kappu krishnana oppisi kunisida vyasaraya keltangi ||2|| Varahaja nadiya teeradi iddu bhakutara porevava yarakka| har…