Haridasa Sahitya — Vyasadasa

Teralidaru vijayarayaru

ತೆರಳಿದರು ವಿಜಯರಾಯರು

Composer: Jagannatha Dasaru · Deity: Vijaya Dasaru · Genre: Dasara Pada

Kannada lyrics

ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||pa|| ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ||1|| ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ವರ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ ||2|| ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ ||3|| teraLidaru vijayarAyaru vijaya viThalan…

Transliteration

yuva saMvatsarada kArtika Suddha daSami viBaka ravu guruvAra prathama yAmadI pavanAntarAtmaka SrI hariya darSanO tsava saMpAdisuva bahu lavalavikeyiMda ||1|| dharaNiyoLu bAskara kShEtravenisuva cippa giriyeMba grAmadi vibudhara muKadi vara BAgavata brahmasUtra BArata gIta maruta SAstrArtha graMthagaLanAlisutali ||2|| suKatIrtha muniya manakanukUla sacCAstra nikaragaLa kavana rUpadalli racisi Bakat…