Haridasa Sahitya — Vyasadasa

Teliso illa mulugiso

ತೇಲಿಸೋ ಇಲ್ಲ ಮುಳುಗಿಸೋ

Composer: Purandara Dasaru · Deity: Hari · Genre: Philosophy

Kannada lyrics

ತೇಲಿಸೋ ಇಲ್ಲ ಮುಳುಗಿಸೋ ನಿನ್ನ ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ।।ಪ।। ಸತಿಸುತ ಧನದಾಸೆ ಎಂಬಂತೆ ಮೋಹದಿ ಹಿತದಿಂದ ಅತಿನೊಂದು ಬೆಂಡಾದೆನೊ ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ – ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ।।೧।। ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ ಶರಧಿಯೊಳಗೆ ಬಿದ್ದು ಮುಳುಗಿದೆನೊ ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ ಕರುಣಾಭಯವಿತ್ತು ಪಾಲಿಸೊ ಹರಿಯೆ ।।೨।। ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನೋ ಭಕ್ತಿರಸವ ಬಿಟ್ಟು ಶೇಷಶಯನ ಶ್ರೀ ಪುರಂದರವಿಠಲನೆ ದಾಸರ ಸಂಗವಿತ್ತು ಪಾಲಿಸೊ ಹರಿಯೆ ।।೩।।

Transliteration

Teliso illa mulugiso ninna Kalige biddeno parama krupalo ||pa|| Satisuta dhanadase embante mohadi Hitadinda atinondu bendadeno Gatikoduvara kane matiya paliso lakshmi – Pati ninna caranada smaraneyittenage ||1|| Jare roga daridrya kasmalaventemba Saradhiyolage biddu mulugideno Sthiravalla dehavu nerenambide ninna Karunabayavittu paliso hariye ||2|| Doshavullava nanu basheyullava ninu Mosa hodeno B…