Haridasa Sahitya — Vyasadasa
Taratamya- Purandara dasara kriti
ಸತತ ಗಣನಾಥ ಸಿದ್ಧಿಯ ಕಾರ್ಯದಲಿ
Composer: Purandara Dasaru · Deity: Hari · Genre: Philosophy
Kannada lyrics
ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ।।ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು ಭಕುತಿ ದಾಯಕಳು ಶ್ರೀ ಭಾರತಿದೇವಿ ।।೧।। ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು ಮತಿ ಪಾಲಿಸುವ ನಮ್ಮ ಪವಮಾನನು ।।೨।। ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು ।।೩।।
Transliteration
Satata gananaatha siddhiyaniva kaaryadali mati prerisuvalu paarvatidevi mu- kutipathake manaviva maharudradevaru hari bha- kutidaayakalu bhaaratidevi yu- kuti shaastragalalli vanajasambhavanarasi satkarmagala nadesi suj~jaana matiyittu gati paalisuva namma pavamaananu chittadali ananda sukavanivalu ramaa bha- kutajanarodeya namma purandaravitthalanu satata ivarolu nintu I krutiya nadesuvanu |