Haridasa Sahitya — Vyasadasa
Tarakka bindige na nirige
ತಾರಕ್ಕ ಬಿಂದಿಗೆ ನಾ ನೀರಿಗೆ
Composer: Purandara Dasaru · Deity: Hari · Genre: Philosophy
Kannada lyrics
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ ||ಪ|| ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ ||ಅ.ಪ|| ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ ||೧|| ಗೋವಿಂದ ನೀರಿಗೆ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ ||೨|| ಬಿಂದುಮಾಧವನ ಘಟ್ಟಕ್ಕೆ ಹೋಗುವ ತಾರೇ ಬಿಂದಿಗೆಯ ಪು ರಂದರ ವಿಠಲಗೆ ಅಭಿಷೇಕ ಮಾಡುವ ತಾರೇ ಬಿಂದಿಗೆಯ ||೩||
Transliteration
Tarakka bindige na nirige hoguve tare bindigeya ||pa|| Bindige odedare omde kasu tare bindigeya ||a.pa|| Ramanamavemba rasavulla nirige tare bindigeya Kaminiyara kude ekamtavadenu tare bindigeya ||1|| Govimda nirige gunavulla nirige tare bindigeya Avava pariyalli amrutada nirige tare bindigeya ||2|| Bindumadhavana gattakke hoguva tare bindigeya pu Randara vithalage abisheka maduva tare bindigeya |…