Haridasa Sahitya — Vyasadasa
Tappugalenisade ennappa
ತಪ್ಪುಗಳೆಣಿಸದೆ ಎನ್ನಪ್ಪ
Composer: Haridasa · Deity: Raghavendra Teertharu · Genre: Dasara Pada
Kannada lyrics
ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು ಸರ್ಪಶಯನನ ದೂತಾ || ಪ || ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ ವರ್ತಕ ರಾಘವೇಂದ್ರ – ಮುನಿಪ || ಅ || ಪ್ರತಿವರುಷ ಬಂದು ನುತಿಸಿ ಪೋಗು ಎಂದು ನತಸ್ವಪ್ನದಲಿ ನೀ ಬಂದು ಹಿತದಿಂದ ಪೇಳಲು ರತನಾಗಿ ಧನದಿ ಮ ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ || ೧ || ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ ಮೌನ ಮಾರ್ಗಗಳರಿಯೇ ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ ಏನೂ ಮಾಡದೆ – ದುಷ್ಟಮಾನವರೊಳಗಿದೆ || ೨ || ಏಸುಜನ್ಮದಿ ಬಂದ ದೋಷವ ಕಳೆದು ವಿ ಶೇಷ ಸುಖವ ಕೊಡುವ ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ ಣೇಶವಿಠ್ಠಲನ ದೂತಾ – ಮತ್ಪ್ರೀತಾ || ೩ ||
Transliteration
Tappugalenisade ennappa kayalibeku Sarpasayanana duta || pa || Ippattondu kubashyava murida sumata pra Vartaka raghavendra – munipa || a || Prativarusha bandu nutisi pogu endu Natasvapnadali ni bandu Hitadinda pelalu ratanagi dhanadi ma Retubitte nimmanu – yatikulottama || 1 || Snana sandhyana sujapatapa vrata homa Mauna margagalariye J~janigalanu sandhanapurvaka puje Enu madade – dushtamanavarola…