Haridasa Sahitya — Vyasadasa
Tappugalellava pariharisuva nammappanallave ninu
ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು
Composer: Purandara Dasaru · Deity: Hari · Genre: Philosophy
Kannada lyrics
ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು ||ಪ|| ಅಷ್ಟಾದರು ಎನ್ನವಗುಣ ಎಣಿಸದೆ ಸತ್ಯ ಸಂಕಲ್ಪ ತಿಮ್ಮಪ್ಪ ನೀನು ||ಅ|| ಬೆಳಗಿನ ಝಾವದಿ ಹರಿಯ ಸ್ಮರಣೆಯ ಮಾಡದಿರುವುದು ತಪ್ಪು ಮಲಮೂತ್ರ ವಿಸರ್ಜನೆ ಮೃತ್ತಿಕೆಯಲಿ ಮಲವ ತೊಳೆಯದಿರುವುದು ತಪ್ಪು ತುಳಸಿ ವೃಂದಾವನ ಗೋಸೇವೆಗೆ ಆಲಸ್ಯ ಮಾಡುತಲಿರುವುದು ತಪ್ಪು ನಳಿನಸಹೋದರನಿಗರ್ಘ್ಯವನೀಯದೆ ಕಲಿವ್ಯಾಸಂಗದಲಿರುವುದು ತಪ್ಪು || ದಿನದಿನ ಉದಯ ಸ್ನಾನ ಮಾಡದ ತನು ವಂಚನೆಯಾ ತಪ್ಪು ಮುನಿಸುರ ಭೂಸುರರಾರಾಧಿಸದೆ ಧನ ವಂಚನೆಯ ತಪ್ಪು ಕ್ಷಣ ಗುಣ ಜಿಜ್ಞಾಸಿಲ್ಲದೆ ದುರ್ಜನರ ಸಂಸರ್ಗದ ತಪ್ಪು ವನಜಾಕ್ಷ ನಿನ್ನ ಧ್ಯಾನವ ಮಾಡದೆ ಮನ ವಂಚನೆಯ ತಪ್ಪು || ಕಣ್ಣಿಲಿ ಕೃಷ್ಣಾಕೃತಿಯ ನೋಡದೆ…
Transliteration
Tappugalellava pariharisuva nammappanallave ninu ||pa|| Ashtadaru ennavaguna enisade satya sankalpa timmappa ninu ||a|| Belagina javadi hariya smaraneya madadiruvudu tappu Malamutra visarjane mruttikeyali malava toleyadiruvudu tappu Tulasi vrumdavana gosevege Alasya madutaliruvudu tappu Nalinasahodaranigargyavaniyade kalivyasangadaliruvudu tappu || Dinadina udaya snana madada tanu vancaneya tappu…