Haridasa Sahitya — Vyasadasa

Tappu nodade

ತಪ್ಪು ನೋಡದೆ

Composer: Prasanna Venkata Dasaru · Deity: Venkatesha · Genre: Dasara Pada

Kannada lyrics

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ ತಪ್ಪು ನೋಡದೆ ಬಂದೆಯಾ ||ಪ|| ಆ ಪಾದ ಮೌಳಿ ಎನ್ನೋಳು ಅಘ ಬಹಳ ಶ್ರೀಪತಿ ಕಾಯ್ದೆಯಾ ಉದಧಿ್ದ್ದೆಯಾ ||೧|| ಜಗದಘಹರನೆಂಬೊ ನಿನ್ನಯ ಬಿರುದು| ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨|| ಇಂದೆನ್ನ ಕಲುಷವಾರಿಸೊ ಭವತಾರಿಸೋ| ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩||

Transliteration

tappu nODade bandeyA ennaya tande tappu nODade bandeyA ||pa|| A pAda mauLi ennOLu aGa bahaLa SrIpati kAydeyA udadhiddeyA ||1|| jagadaGaharaneMbo ninnaya birudu| triguNAtItane rAmane guNadhAmane ||2|| indenna kaluShavAriso BavatArisO| prasannavenkaTa ramaNA Baya SamanA ||3||