Haridasa Sahitya — Vyasadasa
Tangi nee kelidya anganaamani
ತಂಗಿ ನೀ ಕೇಳಿದ್ಯಾ ಅಂಗನಾಮಣಿ
Composer: Sreedavitthala Dasaru · Deity: Sri Jagannatha Dasaru · Genre: Bhakti
Kannada lyrics
ತಂಗಿ ನೀ ಕೇಳಿದ್ಯಾ ಅಂಗನಾಮಣಿ ರಂಗನೊಲಿದ ಭಾಗವತರ ಮಹಿಮೆಗಳ ||pa|| ಶ್ರವಣಾದಿ ನವವಿಧ ಸವಿಯ ಭಕುತಿಯಿಂದ ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ||1|| ಅಮಲ ಸತ್ಕರ್ಮದಿ ಶಮದಮಪೂರ್ವಕ ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ||2|| ಶ್ರೀದವಿಠಲನ ಪಾದಭಜಕರಾದ ಸಾಧುವರ್ಯರ ಸುಬೋಧ ಬಣ್ಣಿಪರಾರೆ ||3||
Transliteration
tangi nI kELidyA anganAmaNi ranganolida BAgavatara mahimegaLa ||pa|| SravaNAdi navavidha saviya Bakutiyinda pravINanenisi mAdhavana dhyAnipa KyAti ||1|| amala satkarmadi SamadamapUrvaka amita mahimananGri kamalAKyapara KyAti ||2|| SrIdaviThalana pAdaBajakarAda sAdhuvaryara subOdha baNNiparAre ||3||