Haridasa Sahitya — Vyasadasa

Tangi ne kelidya

ತಂಗಿ ನೀ ಕೇಳಿದ್ಯಾ

Composer: Haridasa · Deity: Raghavendra Teertharu · Genre: Dasara Pada

Kannada lyrics

ತಂಗಿ ನೀ ಕೇಳಿದ್ಯಾ ರಾಘವೇಂದ್ರಾ- ಘಂಗಳ ಕಳೆದು ಸುಖಂಗಳ ಕೊಡುವುದು ತಂಗಿ ನೀ ಕೇಳಿದ್ಯಾ || ಪ || ಶ್ರೀಪೂರ್ಣಭೋಧರ ಮತಪಯೋಬ್ಧಿಗೆ ಚಂದ್ರ ತಾಪಸೋತ್ತಮರ ದಿವ್ಯಾಪಾರ ಮಹಿಮೆಯ || ೧ || ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು ಸಂಗೀತಮುಖದಿ ಜನಂಗಳು ಪಾಡುವುದು || ೨ || ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು ಸುವಿವೇಕ ಮನದಿಂದ ಕವಿಜನ ಪಾಡುವುದು || ೩ || ಮಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ ಸಂದೇಹವಿಲ್ಲ ಬಹುಮಂದಿಮಕ್ಕಳ ಕೊಟ್ಟ || ೪ || ಗುರುಪ್ರಾಣೇಶವಿಠ್ಠಲ ಸರ್ವಕಾಮಿತಾರ್ಥವ ಗುರುರಾಘವೇಂದ್ರರಲ್ಲಿ ನಿಂತು ನಿರುತದಿ ಕೊಡಿಸುವ || ೫ ||

Transliteration

tangi ni kelidya raghavendra- gangala kaledu sukamgala koduvudu tangi ni kelidya || pa || sripurnabodhara matapayobdhige chandra tapasottamara divyapara mahimeya || 1 || angahinarige divyanga kottarendu sangitamukadi janangalu paduvudu || 2 || kiviyilladavarige tavakadi kottarendu suviveka manadinda kavijana paduvudu || 3 || madhyastriyaru bandu nindu aradhise sandehavilla bahumandimakkala kotta |…