Haridasa Sahitya — Vyasadasa

Tala beku takka mela beku

ತಾಳ ಬೇಕು ತಕ್ಕ ಮೇಳ ಬೇಕು

Composer: Purandara Dasaru · Deity: Hari · Genre: Philosophy

Kannada lyrics

ತಾಳ ಬೇಕು ತಕ್ಕ ಮೇಳ ಬೇಕು ಶಾಂತ ವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು ರತಿಪತಿಪಿತನೊಳು ಅತಿ ಪ್ರೇಮವಿರಬೇಕು ಗಳ ಶುದ್ಧವಿರಬೇಕು ತಿಳಿದು ಪೇಳಲು ಬೇಕು ಕಳವಳ ಬಿಡಬೇಕು ಕಳೆಮುಖವಿರಬೇಕು ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು ಪುರಂದರವಿಠಲನೆ ಪರದೈವವೆನಬೇಕು

Transliteration

Tala beku takka mela beku santa Vele beku ganavannu kelabekembuvarige Yatiprasavirabeku gatige nillisabeku Ratipatipitanolu ati premavirabeku Gala suddhavirabeku tilidu pelalu beku Kalavala bidabeku kalemukavirabeku Aritavarirabeku harusha heccali beku Purandaravithalane paradaivavenabeku