Haridasa Sahitya — Vyasadasa

Svikarisenna poojeya tulasi

ಸ್ವೀಕರಿಸೆನ್ನಯ ಪೂಜೆಯ ತುಳಸೀ

Composer: Haridasa · Deity: Tulasi · Genre: Dasara Pada

Kannada lyrics

ಸ್ವೀಕರಿಸೆನ್ನಯ ಪೂಜೆಯ ತುಳಸೀ ಲೋಕೋತ್ತರನರಸೀ ||pa|| ಈ ಕರಗಳು ಧನ್ಯಗಳಾಗಲಿ ಮನ ವ್ಯಾಕುಲ ಪರಿಹರಿಸಮ್ಮ ಜನನಿ ||a.pa|| ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಫುಲ್ಲ ಕುಸುಮವಿರಲು ಒಲ್ಲನು ಹರಿ ನೀನಿಲ್ಲದ ಪೂಜೆಯ ಬಲ್ಲರಿದನು ಜ್ಞಾನಿ ಗಳು ಮಾತೆ ||1|| ವಂದಿಸಿ ನಿನ್ನಯ ಚರಣಗಳಿಗೆ ಫಲ ಗಂಧ ಪುಷ್ಪಗಳನರ್ಪಿಸುವೆ ಬೃಂದಾವನಲೋಲನ ವಲ್ಲಭೆ ಮೃದು ಮಂದಹಾಸವನು ತೋರೆ ಮಾತೆ||2|| ನೀನಿದ್ದೆಡೆ ಹರಿ ತಾನಿರುವನು ಅನು ಮಾನವಿಲ್ಲವೆನಗೆ ದಾನ ಧರ್ಮಗಳ ಫಲಕೆ ಕಾರಣಳು ನೀನಾಗಿರುವೆ ಪ್ರಸನ್ನವದನೆ ||3||

Transliteration

svIkarisennaya pUjeya tuLasI lOkOttaranarasI ||pa|| I karagaLu dhanyagaLAgali mana vyAkula pariharisamma janani ||a.pa|| mallige saMpige jAji sEvaMtige Pulla kusumaviralu ollanu hari nInillada pUjeya ballaridanu jnanigaLu mAte ||1|| vandisi ninnaya caraNagaLige Pala gandha puShpagaLanarpisuve bRundAvanalOlana vallaBe mRudu mandahAsavanu tOre mAte||2|| nIniddeDe hari tAniruvanu anu mAnavillavenage…