Haridasa Sahitya — Vyasadasa

Svami mukya prana ninna

ಸ್ವಾಮಿ ಮುಖ್ಯಪ್ರಾಣ, ನಿನ್ನ

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ ನೀ ಹಿಡಿದ್ಯೋ ರಾಮನ ಚರಣ , ನೀ ನ್ಹೌದೌದೊ ಜಗತ್ಪ್ರಾಣ || ಸಂಜೀವಿನಿ ಪರ್ವತವ, ನೀ ನಂಜದೆ ತಂದ್ಯೋ ನೀನು ಅಂಜನೆಸುತ ಸದಾಕಾವ, ಹೃ- ತ್ಕಂಜವಾಸ ಸರ್ವಜೀವ || ಏಕಾದಶಿಯ ರುದ್ರ , ನೀ ಒಯ್ದ್ಯೋ ರಾಮರ ಮುದ್ರ ಸಕಲವಿದ್ಯಾಸಮುದ್ರ , ನೀ ನ್ಹೌದೌದೋ ಬಲಭದ್ರ || ವೈಕುಂಠದಿಂದ ಬಂದು, ನೀ ಪಂಪಾಕ್ಷೇತ್ರದಿ ನಿಂದು ಯಂತ್ರೋದ್ಧಾರಕನೆಂದು, ಪು- ರಂದರವಿಠಲ ಸಲಹೆಂದು ||

Transliteration

Svami mukya prana ninna marevara gantala gana Hididyo ramana charana ni haudaudo mukyaprana || pa || Sanjivana parvatava ni anjade tamdyo dev | Anjane suta sadakava hrut kanjavasa sarvajiva || 1 || Ekadasara rudra ni vaidyoramara mudra | Sakala vidya samudra ni haudu haudu balabadra || 2 || Vaikunthadinda bandu ni panpakshetradi nindu | Yantroddarakanendu purandara vithala salahendu || 3 ||