Haridasa Sahitya — Vyasadasa

Surapanalayadante mantralaya

ಸುರಪನಾಲಯದಂತೆ ಮಂತ್ರಾಲಯ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ಸುರಪನಾಲಯದಂತೆ ಮಂತ್ರಾಲಯ||pa|| ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ||a.pa|| ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ ಭೌಮ ಸುಧೀಯೀಂದ್ರಸುತ ರಾಘವೇಂದ್ರ ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ ||1|| ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ ತರ ಮನೋರಥಗಳನು ಪೂರೈಸುವಾ ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ ಪರಿಮಳದಿ ತೃಪ್ತಿಬಡಿಸುವ ಮರುತನಂತೆ ||2|| ವಾರಾಹಿ ಎಂಬ ನಂದನ ವನದಿ ಜನರತಿ ವಿ ಹಾರ ಮಾಳ್ಪರು ಸ್ನಾನಪಾನದಿಂದಾ ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು |\3||

Transliteration

Surapanalayadante mantralaya || pa || Karesuvudu kangolisuvudu nolpa janake || a || Surataruvinantippa kirtisaccaya sritaramanorathava Puraisuvadharanisurakyashatbadagalige Divyasudhaparimalavu truptipadisida marutanante || 1 || Kamadhenuvinante ippa gurusarvabauma Sudhindrasuta ragavendra^^A mayavadi tamisra Odisuva cintamaniyante holeva vrundavana || 2 || Varahi enba nandanavanadi viharamalpar U…