Haridasa Sahitya — Vyasadasa

Sundara Kandam by vadirajaru

ಎಷ್ಟು ಸಾಹಸವಂತ ನೀನೇ ಬಲವಂತ

Composer: Vadirajaru · Deity: Hanuma · Genre: Dasara Pada

Kannada lyrics

ಎಷ್ಟು ಸಾಹಸವಂತ ನೀನೇ ಬಲವಂತ | ಇಷ್ಟದಾಯಕ ಭಳಿ ಭಳಿರೇ ಹನುಮಂತ || ಅಟ್ಟುತ ಖಳರನು ಮೆಟ್ಟಿ ಸೀಳುತಲಿ | ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ||ಪ|| ರಾಮರಪ್ಪಣೆಯಿಂದ ಶರಧಿಯ ದಾಟಿ | ಆ ಮಹಾ ಅಸುರೆಯ ಸೀಳಿ ಬಿಸಾಟಿ | ಸ್ವಾಮಿ ಕಾರ್ಯವನುಕೋಲದಿ ಯೋಚಿಸಿ | ಪ್ರೇಮದಿ ನಡೆದನು ಅರೆಲೆ ಸಾಟಿ || ೧ || ದೂರದಿಂದಸುರನ ಪುರವನ್ನೆ ನೋಡಿ | ಮನದಿ ಶ್ರೀ ರಾಮರ ಸ್ಮರಣೆಯಾ ಮಾಡಿ | ಹಾರುತ ಹರುಷದಿ ವರಸಿಲಂಕಿಣಿಯನು | ವಾರಿಜ ಮುಖಿಯಳ ಕಂಡು ಮಾತಾಡಿ || ೨ || ರಾಮರ ಕ್ಷೇಮವ ರಮಣಿಗೆ ಪೇಳಿ | ತಾಮಸ ಮಾಡದೆ ಮುದ್ರಿಕೆಯ ನೀಡಿ | ಭೂಮಿಜೆ ಜಾನಕಿ ಕುರುಡು ನೀಡಲಾಗ | ಆ ಮಹಾವನದೊಳು ಫಲಗಳ ಬೇಡಿ|| ೩ || ಕಣ್ಣಿಗೆ ಬೇಕಾದ ಹಣ್ಣು ಸವಿದು |…

Transliteration

Eshtu saahasavanta neene balavanta | dhitta Mooruti bhali bhalire hanumanta ||pa|| Attuva khalarede metti tulidu | tale kutti Chendaadida dhitta neenahudo ||a.pa|| Raamarappaneyinda sharadhiya daati | Aa mahaa lankeya kande kireeti | Swaamiya kaaryava premadi nadesi | Ee mahiyolu ninagaarai saati ||1|| Dooradindasurana puravane nodi | Bharadi shree raamara smaraneya maadi | Haaride harushadi orisi…