Haridasa Sahitya — Vyasadasa

Summane vaishnavane nambiri

ಸುಮ್ಮನೆ ವೈಷ್ಣವನೆಂಬಿರಿ ಪರ

Composer: Sripadarajaru · Deity: Vishnu · Genre: Dasara Pada

Kannada lyrics

ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ ಸುe್ಞÁನವನರಿಯದ ಮನುಜನ ||pa|| ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆ ಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||1|| ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆ ನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ||2|| ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕ ವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ||3|| ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿ ಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ…

Transliteration

Summane vaishnavane nambiri | parabrahma suj~jaanavanariyada manujara || pa || Ooru maatugalaadi danidenallade | naaraayana krushna sharanendene || naariyara nudikeli marulaadenallade | aaryara maatu mannisidenenayya || 1 || Mukhava toledu naama balakondenallade | sukhateerthara shaastra Odidene || mukha shrungaarake manasotenallade | bhakutirasadalli omme mulugidenenayya || 2 || Jagatu satyavendu…