Haridasa Sahitya — Vyasadasa
Suladhi on Dig vijaya moola raama devaru Rayaru mutt(Vijayeendra theertharu)
ದಿಗ್ವಿಜಯ ಮೂಲರಾಮ ಸುಳಾದಿ
Composer: Haridasa · Deity: Rama · Genre: Sulaadi
Kannada lyrics
ಅಟ್ಟತಾಳ ಪರಬೊಮ್ಮ ಹರಿಯು ತಾ ನರರೂಪವ ತಾಳಿದ ನರನಾದ ದಶರಥನ ವರದೇಹದಲವತರಿಸಿ ಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆ ಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನ ಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮ ಪರಿತಂದು ವಿಘ್ನವನು ಪರಿಹರಿಸಿದ ಮುನಿವರನ ಹರುಷದಿಂದ ಪರಮಾನಂದ ಶರಧಿಯಲೋಲಾಡಿಸಿದ ಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ ||1|| ಮಠ್ಯ ಈತನೆಂತು ಯಜ್ಞದ ವಿಘ್ನವ ಪರಿಹರಿಸುವ ಪೋತ ಮಹಾದ್ಭುತರಂತಿಹ ರಕ್ಕಸರ ವೀತ ಭಯನಾಗಿ ಕೊಲ್ಲುವುದೆಂತೊ ಭೂತಳಕಚ್ಚರಿ ವಿಜಯೀಂದ್ರ ರಾಮನ ಚರಿತ ||2|| ರೂಪಕ ಜನಕನೆಂಬ ಜನಪತಿಯ ಮನೆಗೆ ಹೋಗಿ ಜಾನಕಿಯ ಮನಕೆ ಹರುಷವಪ್ಪಂತೆ ಜನಪದ ಕೈವಾರಿಸುತ್ತಿರೆ ಮನಕೆ ಅಣಕವಾಡ…
Transliteration
maThya Itanentu yaj~jada viGnava pariharisuva pOta mahAdButarantiha rakkasara vIta BayanAgi kolluvudento BUtaLakaccari vijayIndra rAmana carita ||2|| rUpaka janakaneMba janapatiya manege hOgi jAnakiya manake haruShavappaMte janapada kaivArisuttire manake aNakavADi Sivanadhanuva murida vijayIndrarAma manake haruShavappante ||3|| JaMpe ivanarBakane ivana munigaLAdavarella manadi BAvisi kANadeMbudari…