Haridasa Sahitya — Vyasadasa

Sukruta palavo darushana

ಸುಕೃತ ಫಲವೋ ದರುಶನ

Composer: Haridasa · Deity: Vyasarayaru · Genre: Dasara Pada

Kannada lyrics

ಸುಕೃತ ಫಲವೋ ದರುಶನ ಏಸು ಪುಣ್ಯಕರವೋ ||pa|| ಸುಕೃತ ಫಲವೋ ಶ್ರೀ ವ್ಯಾಸರಾಜ ಗುರುವರ್ಯರ ದರುಶನ ||a.pa|| ವರ ಕರ್ಣಾಟಕ ಸಿಂಹಾಸನದಲಿ ಮೆರೆಯುತಲಿರುವ ಯತೀಂದ್ರರ ದರುಶನ ||1|| ಚಂದ್ರಿಕ ನ್ಯಾಯಾಮೃತ ತಾಂಡವದಲಿ ನಂದಕುಮಾರನ ಕುಣಿಸುವÀ ದರುಶನ ||2|| ಹಗಲು ದೀವಟಿಗೆ ಹಸುರು ಛತ್ರಿ ಮುಖ ಬಗೆ ಬಗೆ ಬಿರುದಾವಳಿಗಳ ವೈಭವ ||3|| ರಾಜನ ಕುಹಯೋಗವನೆ ನಿವಾರಿಸಿ ರಾಜಾಧಿರಾಜ ಸಂಪೂಜ್ಯರ ದರುಶನ ||4|| ರುಕುಮಿಣಿ ಭಾಮಾರಮಣನ ಪೂಜಿಸಿ ಸುಕೃತ ಸ್ವರೂಪ ಪ್ರಸನ್ನರ ದರುಶನ ||5||

Transliteration

sukRuta PalavO daruSana Esu puNyakaravO ||pa|| sukRuta PalavO SrI vyAsarAja guruvaryara daruSana ||a.pa|| vara karNATaka siMhAsanadali mereyutaliruva yatIndrara daruSana ||1|| chandrika nyAyAmRuta tAnDavadali nandakumArana kuNisuvaÀ daruSana ||2|| hagalu dIvaTige hasuru Catri muKa bage bage birudAvaLigaLa vaiBava ||3|| rAjana kuhayOgavane nivArisi rAjAdhirAja saMpUjyara daruSana ||4|| rukumiNi BAm…