Haridasa Sahitya — Vyasadasa

Sudu sudu yachakana janma vyartha vyartha

ಸುಡು ಸುಡು ಯಾಚಕನ ಜನ್ಮ ವ್ಯರ್ಥ ವ್ಯರ್ಥ

Composer: Vijaya Dasaru · Deity: Hari · Genre: Ugabhoga

Kannada lyrics

ಸುಡು ಸುಡು ಯಾಚಕನ ಜನ್ಮ ವ್ಯರ್ಥ ವ್ಯರ್ಥ ಕೊಡುವೆನೆಂದರೆ ಬಹು ದಿವಸ ಕಾಯ್ದು ಅಡಿಗೆ ಬಿದ್ದು ಅವನ ಮನಸ್ಸು ತನ್ನ ಕಡಿಗೆ ಮಾಡಿಕೊಂಡು ಯೋಚಿಸುತ ಗಡಗಿಯೊಳಗಿನ ನೊಣದಂತೆ ಸುತ್ತುತ ಆಸೆ ಬಿಡಲಾರದೆ ಹಿಡಿಯಲಾರದೆ ಮಿಡುಕುತ ಕಡುಮೂರ್ಖನಂತೆ ನಾನಾದೆನು ಪ್ರಾಣೇಶ ಕಡು ಸಂಪೂರ್ಣ ವಿಜಯವಿಠ್ಠಲರೇಯ ಕೊಡುಗೈ ದಾತನಿಗೆ ಇನಿತು ಪರರಾಶೆ||

Transliteration

Sudu sudu yachakana janma vyartha vyartha Koduvenebdare bahudivasa kaydu Adige biddu avana manasu tanna Kadege madikondu yocisuta Gadigeyolagina nonadante suttuta Ase Bidalarade hidiyalarade midukuta Kadumurkanante nanadenu pranesa Sudu sudu yacaka janma vyartha vyartha Kadusampurna vijayavithalareya Kodagaidatanire intu pararase |