Haridasa Sahitya — Vyasadasa
Sudhaamana haadu
ಸುದಾಮನ ಹಾಡು
Composer: Purandara Dasaru · Deity: Hari · Genre: Philosophy
Kannada lyrics
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ ವಂದನೆ ಮಾಡಿದಳು || ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ | ಸದ್ಗತಿಯಾಗಲೆನುತ ಪೇಳಿದಳು || ೧ || ಸುದಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ | ಹೊದಿಯಲಿಕ್ಕಿಲ್ಲ ಆಶನವಿಲ್ಲ || ಗಡಗಡ ನಡಗುತ ಮಧುರ ಮಾತಾಡುತ್ತಾ | ಸದನದೊಳಿರುತಿದ್ದನಾಗ || ೨ || ಪ್ರಾತಃಕಾಲದಲ್ಲೆದ್ದು ನಿತ್ಯಕರ್ಮವ ಮುಗಿಸಿ | ನಾಥನ ಧ್ಯಾನ ಮಾಡುತಲಿ || ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ ತರುವನು ಮುಷ್ಟಿ ತುಂಬ || ೩ || ಪತಿವ್ರತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ ಪಾಕ ಮಾಡುವಳು || ಅತಿಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ ಉಳಿದಿದ್ದುಂಬುವಳು || ೪ || ಹಸಿವೆ ತ…
Transliteration
sudhamana-haadu(Kannada lyrics) Pathiya paadakkeragi mati bedi paarvati | sutage vandaneya maadidalu || Ati bhaktiyindali stutisuva janarige sa- | dgathiyaagalenuta pelidalu || 1 || Sudhaamanemborva sookshmada braahmana | hodiyalikkilla aashanavilla || Gadagada naduguta madhura maataaduta | sadanadolirutiddanaaga || 2 || Praatah kaaladalleddu nitya karmava mugisi | naathana dhyaana maadutali || Pa…