Haridasa Sahitya — Vyasadasa
Subbaraya subakaya
ಸುಬ್ಬರಾಯ ಶುಭ
Composer: Vijaya Dasaru · Deity: Subramanya · Genre: Bhakti
Kannada lyrics
ಸುಬ್ಬರಾಯ ಶುಭ ಕಾಯಾ | ಸುಬ್ಬರಾಯ ಶುಭ ಕಾಯಂಗಜ ನೀನೆ || ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ||pa|| ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು | ಮಾರಾ ಸಾಂಬಾ || ಸಾರಿದೆ ನಿನ್ನವತಾರ ಮೂಲರೂಪ || ಸಾರಿಸಾರಿಗೆ ಸಂಸಾರಮನ ವಿ || ಸ್ತಾರವಾಗದಂತೆ ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1|| ಮಾಡುವೆ ವಂದನೆ ಸತತ | ಸಜ್ಜನರೊಳ | ಗಾಡಿಸು ಭಕ್ತ ಪ್ರೀತಾ || ಪಾಡಿದವರ ಕಾ | ಪಾಡುವ ರತಿ-ಪತಿ | ಈಡಾರು ನಿನಗೇ ನಾಡಿನೊಳಗೆಲ್ಲ | ಬೇಡುವೆ ದಯವನ್ನು | ಮಾಡುವಿರಕುತಿಯ | ನೀಡು ಬಿಡದಲೆ ನೋಡು||2|| ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ | ಮುಕ್ಕಣ್ಣಗಳ ತನಯ || ಸೊಕ್ಕಿದ ತಾರಕ ರಕ್ಕಸ ಹರ ದೇ | ವಕ್ಕಳ ನಿಜ ದಳಕೆ ನಾಯಕನಾದ…
Transliteration
Subbaraya subakaya | Subbaraya nija kayangaja nine | Nibbara mahima mahambudhi skanda || pa|| Mara Baratane sambarari | sanatku | Mara kumara samba | Saride ninnavatara mularupa || Sari sarige samsarake mana | vi | Staravaguvante | harisu | Dara vyapara guna paravara || 1 || Maduve vandane satata | sajjanarola | Gadisu Bakta prita | Padidavara kapaduva rati pati || Idaru ninagi nadinolagella | Bed…