Haridasa Sahitya — Vyasadasa
Srisha vedavyasanaadhanu
ಶ್ರೀಶ ವೇದವ್ಯಾಸನಾದನು
Composer: Vijaya Dasaru · Deity: Vedavyasa · Genre: Bhakti
Kannada lyrics
ಶ್ರೀಶ ವೇದವ್ಯಾಸನಾದನು ||pa|| ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಸಾಸಿರ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ||a.pa|| ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ವಪ್ಪದಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ ||1|| ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ…
Transliteration
SrISa vEdavyAsanAdanu ||pa|| SrISa vEdavyAsanAgalu sAsira nayana sAsira vadana sAsira kara mikka surarella tu- tisi higguta hAraisalandu ||a.pa|| darpaka janaka sarpatalpanAgi tappadanugAla ippa vAridhIli vappadali kandarpa haranaiya suparNarathanAgi oppikonDu ippattu lakShagalippa yOjanada appana aramane darpaNadante tA rappatha mIridantippadu nODi sA- mIpakke vANISa bappa bEgA ||1|| bandu bennai…