Haridasa Sahitya — Vyasadasa

Sri Krishna sulaadhi

ಶ್ರೀಕೃಷ್ಣ ಸುಳಾದಿ

Composer: Sripadarajaru · Deity: Krishna · Genre: Sulaadi

Kannada lyrics

ಶ್ರೀಕೃಷ್ಣ ಸುಳಾದಿ ವಿಷಯ: ಶ್ರೀಕೃಷ್ಣ ಚರಿತ್ರೆ, ಗೋಪಿಕಾ ವಿರಹ ರಾಗ: ಕಾಪಿ ಅಂಕಿತ: ರಂಗವಿಠ್ಠಲ ಧ್ರುವತಾಳ ಈ ವನದೆಡೆಗಳು, ಈ ನದಿ ಪುಲಿನಗಳು, ಈ ಶಿಲೆಗಳು, ಈ ಸುರತರುವಿನ ನೆರಳು, ಈ ತರುಲತೆಗಳು, ಈ ಶುಕಪಿಕರವ — ಯಾಕೆ ಮಾಧವನ ಮರೆಯಲೀಯವೆ, ಕೇಳದಿ? ಆ ಮುಗುಳುನಗೆಯ, ಆ ಸೊಬಗ, ಆ ಸುರತರು ನೆರಳಲ್ಲಿ ರತಿಯು, ಈ ಸುರತವ ನರುಹಿದ ಆ ಬಾಲೆಯರಿಗೆ, ಈ ಸುಗುಣಮಯ ರಂಗವಿಠ್ಠಲನೆ, ಕೇಳದಿ ॥೧॥ ಮಠ್ಯತಾಳ ಇನ್ನು ರಂಗನ ಸಂಗವ ಇನ್ನೆತ್ತಣದು ಗೋಪಿಯರಿಗೆ? ಮಧುರಾಪುರಿಯ ಮಾನಿನಿಯರ ಬಳಿಗೆ ಕೃಷ್ಣನೆ ಸಿಲುಕಿದನಾಗಿ! ರತಿವಿದಗ್ಧರಾದ ವಧುಗಳು, ರಸಿಕ ನಮ್ಮ ರಂಗವಿಠ್ಠಲಾ ॥೨॥ ರೂಪಕತಾಳ ಬಿಡುವಾರೇ ಅಧಮರರಾ ಗಣಿಕಾ ಸ್ತ್ರೀಯರು ನೆರೆ? ಬಿ…