Haridasa Sahitya — Vyasadasa

Dasadikshe sulaadhi

ದಾಸದೀಕ್ಷೆ ಸುಳಾದಿ

Composer: Sripadarajaru · Deity: Hari · Genre: Sulaadi

Kannada lyrics

ದಾಸದೀಕ್ಷೆ ಸುಳಾದಿ ರಾಗ: ಸಾರಂಗ ಅಂಕಿತ: ರಂಗವಿಠ್ಠಲ ಧ್ರುವತಾಳ ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲ, ನಿನ್ನಾಧೀನ ಬಂಧ ಮೋಕ್ಷ ನಿರಯಗಳು, ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ, ನಿನ್ನಾಧೀನ ಸುಕೃತ ದುಷ್ಕೃತ ಫಲವೋ. ನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲ, ನಿನ್ನಾಧೀನ ಚರಾಚರವೆಂದು ಶ್ರುತಿ ಸಾರುತಿದೆ. ಎಂತು ಪುಣ್ಯ ಪಾಪಂಗಳು ನಿನ್ನ ಲೇಪಿಸುವ, ದೇವ? ಇಂತು ಜೀವರನ ನೋಡಿ ಪಾಪಂಗಳುಣಿಸುವೆ? ಅಂತರಾತ್ಮನೆ, ನಿನ್ನ ಮಹಿಮೆಗೆ ನಮೋ ನಮಃ. ಎಂತು ಚಿತ್ತವ ನೀನೆಂತು ಪಾಲಿಸುವಿಯೋ, ರಂಗವಿಠ್ಠಲ ॥೧॥ ಮಠ್ಯತಾಳ ಮುನ್ನ ನಿನ್ನ ಚರಣಕಮಲವ ನೆನೆಯದೆ ಭವಗಳಲ್ಲಿ ಬಂದೆನ. ಪನ್ನಗಶಯನ ಶ್ರೀಹರೇ, ಎನ್ನ ಗುಣದೋಷವರಸದೆ, ಇನ್ನು ಕ…