Haridasa Sahitya — Vyasadasa

Srinivasa Kalyana composed by Harapana halli bheemavva

ಅಪ್ಪ ವೆಂಕೋಬನ ನೇತ್ರದಲಿ ನೋಡಿ ।

Composer: Harapanahalli Bheemavvanavaru · Deity: Srinivasa / Venkatesha · Genre: Bhakti

Kannada lyrics

ಅಪ್ಪ ವೆಂಕೋಬನ ನೇತ್ರದಲಿ ನೋಡಿ । ಪವಿತ್ರಳಾದೆನೋ ಇಂದಿಗೆ । ತಪ್ಪುಗಳೆಲ್ಲ ನಿನಗರ್ಪಿಸುವೆ ನೀನೀಗ । ಒಪ್ಪಿಕೊಳ್ಳಬೇಕೋ ತಿಮ್ಮಪ್ಪ ಕರುಣಾನಿಧಿಯೇ ।। ಪಲ್ಲವಿ ।। ಹೆದರದೆ ಭೃಗು ಋಷಿಯು । ಒದೆಯೆ ಪಾದಗಳಿಂದ । ಕದನ ಮಾಡುತವೆ ಕೊಲ್ಹಾಪುರಕ್ಕೆ ನಡೆತರಲು ।। ಒದಗಿ ವೈಕುಂಠ ಬಿಟ್ಟು । ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರಿ । ಇದು ನಿನಗೆ ಸದನಾಯಿತೋ ದೇವಾ ।। 1 ।। ಹುತ್ತದಲ್ಲಡಗಿ ನೀ ಗುಪ್ತದಿಂದಿರುತಿರಲು । ಉತ್ತಮ ಗೋವು ಬಂದು । ನಿತ್ಯದಲಿ ಕ್ಷೀರವನು ಕ್ರಿಯೆ ಗೋವಳನಿಂದ ।। ನೆತ್ತಿಯ ನೊಡೆದುಕೊಂಡು । ಸಿಟ್ಟಿನಿಂದಲಿ ಚೋಲರಾಯಗೆ ಶಾಪವನು । ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವಾ ।। 2 ।। ಮಾಯಾ ರಮಣನೆ ನಿನ್ನ । ಗ…

Transliteration

Appa venkobana netradali nodi | Pavitraladeno indige | Tappugalella ninagarpisuve niniga | Oppikollabeko timmappa karunanidhiye || pa || Hedarade brugu rushiyu | Odeye padagalinda | Kadana madutave kolhapurakke nadetaralu || Odagi vaikuntha bittu | Yadunatha yarilladamte guddava seri | Idu ninage sadanayito deva ||1|| Uttama govu bandu | Nityadali kshiravanu kriye govalaninda || Nettiya nodedukond…